ನಿಸರ್ಗವ ನೋಡಿದರೆ ತಣಿಯದ ಮನವುನ್ಠೆ ಈ ಜಗದೊಳು...?? ಈ ಮಾತು ಮೇಲಿನ ಫೋಟೋಗಳನ್ನು ನೋಡಿದರೆ ಅಕ್ಷರಶಃ ಸತ್ಯ ಅನ್ನಿಸುತ್ತದೆ. ಈ ಸುಂದರ ನಯನ ಮನೋಹರ ಜಾಗ ಎಲ್ಲಿರ ಬಹುದು..??ನಾನಿರುವ ಜಾಗದಿಂದ ಎಷ್ಟು ದೂರ..?? ಹೋಗಿ ನೋಡಿ ಸ್ವಲ್ಪ ಕಾಲ ಇದ್ದು ಬರಬಹುದೇ...?? ಈ ಪ್ರಶ್ನೆಗಳ ಸರಮಾಲೆಯೇ ಮನಸೊಳಗೆ ಇದ್ದಿರಬಹುದು.ಬೆಂಗಳೂರಿಗರೇ ಎಲ್ಲೂ ದೂರ ಹೋಗ ಬೇಕಾಗಿಲ್ಲ...ಇದು ನಮ್ಮಲ್ಲಿಯೇ ಇದೆ. ಮೇಲೆ ನೋಡಿರುವ ಫೋಟೋಗಳು ನಮ್ಮ ಸುಂದರ "ಸ್ಯಾಂಕಿ ಕೆರೆ "..ಸಂಜೆಯ ಹೊತ್ತು ತಂಗಾಳಿಯಲ್ಲಿ ಒಂದು ಸುತ್ತು ವಾಕಿಂಗ್ ಹೋಗಿ ಬರಲು ಒಳ್ಳೆಯ ಜಾಗ..ಅದಕ್ಕೆ ಸರಿಯಾಗಿ ಸುಂದರ ಕೆರೆ,ಉದ್ಯಾನವನ ನಿರ್ಮಿಸಿ ಸೌನ್ಧರ್ಯವನ್ನು ಹೆಚ್ಚಿಸಿದ್ದಾರೆ.ಸಂಜೆಯ ಆ ತಂಗಾಳಿಯಲ್ಲಿ ಸುಂದರ ಕೆರೆಯ ಸೌಂದರ್ಯ ಒಮ್ಮೆ ಸವಿದರೆ ಮನಸ್ಸು ಹೃದಯ ಎರಡೂ ಶಾಂತವಾಗುತ್ತದೆ...ಹುಂ..!!!ಹಾಗೆ ಸ್ವಲ್ಪ ಕೆಳಗಿನ ಫೋಟೋವನ್ನೂ ನೋಡಿ...
ಹಾಂ...!!ಬೆಚ್ಚಿಬೀಳಬೇಡಿ...ಇದೂ ಕೂಡ ನಮ್ಮ ಸ್ಯಾಂಕಿ ಕೆರೆಯೇ..ಅನುಮಾನವೇ ಬೇಡ.ಈಗಷ್ಟೆ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಿ ಮುಗಿಸಿರುವ ನಾವುಗಳು ಪೂಜಿಸಿದ ಗಣೇಶನ ಮೂರ್ತಿಗಳೆಲ್ಲ ಈಗ ಇಲ್ಲೇ ಇವೆ..ಸ್ವಲ್ಪ ಗಮನಿಸಿ ನೋಡಿ..ಗಣಪತಿ ಮೂರ್ತಿಗಳು ಕರಗದೆ ಹಾಗೇ ಉಳಿದಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.ನಮ್ಮ ದೈವ ಭಕ್ತಿ ಎಷ್ಟು ಕೊಚ್ಚೆಯನ್ನು ಸೃಷ್ಟಿಸಿದೆ ನೋಡಿ.ಈಗ ದೀಪಾವಳಿ ಬರಿತ್ತಲಿದೆ..ಗಣೇಶನ ಹಬ್ಬದಲ್ಲಿ ನೀರನ್ನ ಕಲುಷಿತ ಗೊಳಿಸಿ ಆಗಿದೆ..ಈಗ ಗಾಳಿಯ ಸರದಿ. ದಯವಿಟ್ಟು ಯೋಚಿಸಿ.ಹವಾಮಾನ ಕೆಟ್ಟು ಕೆರ ಹಿಡಿದಿರುವ ಈ ಸಮಯದಲ್ಲಿ ಮತ್ತೆ ಪಟಾಕಿ ಹೊಗೆಯಿಂದ ಮಲಿನಗೊಳಿಸಬೇಕೆ..?? ಯೋಚಿಸಿ..ನಂತರ ಪಟಾಕಿ ತರಲು ಹೊರಡಿ...ತಂದಿದ್ದಾರೆ ದಯವಿಟ್ಟು ಸುಡಬೇಡಿ..ನಮ್ಮ ಮುಂದಿನ ಪೀಳಿಗೆಗೂ ಕೂಡ ಈ ಭೂಮಿ,ನೆಲ,ಜಲ,ಗಾಳಿಯನ್ನು ಬಿಟ್ಟು ಹೋಗೋಣ..ಸ್ವಲ್ಪ ಶುದ್ದತೆಯ ಜೊತೆಗೆ....ಏನಂತೀರಿ..????