Saturday, October 17, 2009

ಏನಿದು ಲವ್ ಜಿಹಾದ್.....???

"ಪ್ರೀತಿ ಪ್ರೇಮ ಅನ್ನೋದೆಲ್ಲ ಬರಿ ಸುಳ್ಳು...."ಅನ್ನೋ ಮಾತಿಗೆ ಈಗ ಮತ್ತೊಮ್ಮೆ ಜೀವ ಬಂದಿದೆ...ಪ್ರೀತಿಗೆ ವಯಸ್ಸಿನ ಅಂತರವಿಲ್ಲ, ಜಾತಿಯ ಹಂಗಿಲ್ಲ...ಈ ಮಾತುಗಳು ಈಗ ನಿಜಕ್ಕೂ ಭೀಕರ ಅನ್ನಿಸ ತೊಡಗಿದೆ.ದಿನ ಪೇಪರ್, ಟಿವಿ ನೋಡಿದರೆ ಕೇರಳದಲ್ಲಿ "ಲವ್ ಜಿಹಾದ್" ಎಂಬ ಸಕ್ರಿಯ ಮತಾಂತರ ಯಂತ್ರ ಎಂಬ ಸುದ್ದಿಯನ್ನು ಕೇಳೇ ಕೇಳುತ್ತೇವೆ. ಹಾಗಿದ್ದರೆ ಏನಿದು ಲವ್ ಜಿಹಾದ್...??

ಹಿಂದೂ ಮತ್ತು ಕ್ರಿಸ್ತಿಯನ್ ಹುಡುಗಿಯರನ್ನ "ಲವ್" ಎನ್ನೋ ಹೆಸರಲ್ಲಿ ಬಲೆಗೆ ಬೀಳಿಸಿಕೊಂಡು ಇಸ್ಲಾಂ ಮತಕ್ಕೆ ಬದಲಾಯಿಸುವುದೇ ಈ ಲವ್ ಜಿಹಾದ್ ಕೆಲಸ.ಇದು ಭಯೋತ್ಪಾದನೆಯ ಮತ್ತೊಂದು ಮುಖ ಅಂದರೂ ತಪ್ಪಾಗಲಾರದೇನೋ..ಕೇರಳದಲ್ಲಿ ಸರ್ಕಾರೀ ಅಂಶಗಳು ಹೇಳುವ ಪ್ರಕಾರ ಪ್ರತಿ ದಿನ ಸುಮಾರು ಎಂಟು ಇಸ್ಲಾಮೇತರ ಹುಡುಗಿಯರೂ ಕಾಣೆಯಾಗುತ್ತಿದ್ದಾರೆ.2007ರಲ್ಲಿ ಸುಮಾರು 2167 ಹುಡುಗಿಯರು ಕಾಣೆಯಾಗಿದ್ದಾರೆ.ಈ ಸಂಖ್ಯೆ 2008ರಲ್ಲಿ 2530.ಇದು ಕೇವಲ ಕೆರಳವೊಂದರಲ್ಲಿ ಮಾತ್ರ.ಇನ್ನು ನಮ್ಮ ಕರ್ನಾಟಕದ ಕರಾವಳಿ ಜಿಲ್ಲೆಗಳು ಕೂಡ ಈ ಲವ್ ಜಿಹಾದ್ ದೆವ್ವದ ಕಾಟದಿಂದ ಹೊರಗುಳಿದಿಲ್ಲ.ನಮ್ಮ ಮಂಗಳೂರು,ದಕ್ಷಿಣ ಕನ್ನಡ ಈ ಜಿಲ್ಲೆಗಳಲ್ಲಿ ಕೂಡ ಲವ್ ಜಿಹಾದ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
ಕೇರಳದ ಪತ್ತನಂತಿಟ್ಟ ಕಾಲೇಜಿನ ಇಬ್ಬರು ಎಂಬಿಎ ವಿದ್ಯಾರ್ಥಿನಿಯರು ಇದ್ದಕ್ಕಿದ್ದಂತೆ ನಾಪತ್ತೆ ಆದರು.ಅವರ ಹೆತ್ತವರು ಎಷ್ಟೇ ಪ್ರಯತ್ನಿಸಿದರೂ ಕೂಡ ಪತ್ತೆಮಾಡಲಾಗಲಿಲ್ಲ.ನಂತರ ಕೋರ್ಟ್ ಆಜ್ಞೆಯ ಮೇಲೆ ಪೊಲೀಸರು ಕಾರ್ಯಾಚರಣೆ ಮಾಡಿ ಅವರನ್ನು ಕೋರ್ಟ್ಗೆ ಹಾಜರು ಪಡಿಸಿದಾಗ ಹೊರಬಿದ್ದ ಅಂಶ ನಿಜಕ್ಕೂ ಹೃದಯ ವಿದ್ರಾವಕ.ಅವರನ್ನು ಅಪಹರಿಸಿಕೊಂಡು ಹೋಗಿ ಮಲಪ್ಪುರಂ ಅಲ್ಲಿ ಬಂಧಿಸಿ ಇಸ್ಲಾಂಗೆ ಮತಾಂತರಗೊಳ್ಳಲು ಒತ್ತಾಯಿಸಿದ್ದಾರೆ.ಒಬ್ಬಳನ್ನು ಮದುವೆಯಾಗಿ ಅವಳ ಇಷ್ಟಕ್ಕೆ ವಿರುದ್ಧವಾಗಿ ಮತಾಂತರ ಮಾಡಿದ್ದಾರೆ ಕೂಡ.ಇನ್ನೊಬ್ಬಳನ್ನು ಆತನ ಸ್ನೇಹಿತನನ್ನು ಮದುವೆಯಾಗಿ ಮತಾನ್ತರಗೊಳ್ಳುವಂತೆ ಹಿಂಸಿಸಿದ್ದಾರೆ.ಇಸ್ಲಾಂ ಧಾರ್ಮಿಕ ಕೃತಿಗಳನ್ನು ಓದುವಂತೆ ಒತ್ತಡ ಹೇರಿದ್ದಾರೆ.ಈ ಎಲ್ಲ ಗೋಳಿನ ಕಥೆಯನ್ನು ಆ ಹೆಣ್ಣುಮಕ್ಕಳು ಕೋರ್ಟ್ ಮುಂದೆ ಬಿಚ್ಚಿ ಇಟ್ಟಾಗಲೇ ಲವ್ ಜಿಹಾದ್ ಸತ್ಯ ಬೆಳಕಿಗೆ ಬಂದಿದ್ದು.
ಕೇರಳದ ಮುಸ್ಲಿಂ ಸಂಘಟನೆ ಅವರಲ್ಲಿನ ಸುಂದರ ಹುಡುಗರನ್ನ ಕಾಲೇಜ್ ಕ್ಯಾಂಪಸ್ಗಳಲ್ಲಿ ಈ ಕೆಲಸಕ್ಕಾಗಿಯೇ ಬಿಟ್ಟಿದೆ.ಓದು ಬರಹ ಬಾರದಿದ್ದರೂ ಕೂಡ ಇವರು ಚೆನ್ನಾಗಿ ಡ್ರೆಸ್ ಮಾಡಿಕೊಂಡು ಹಣ ಕರ್ಚು ಮಾಡಿಕೊಂಡು ಓಡಾಡುತ್ತಾರೆ.ಇತರೇ ಧರ್ಮೀಯ ಹುಡುಗಿಯರ ಸ್ನೇಹ ಬಳಸಿ ಲವ್ ಎಂಬ ಮಾಟ ಮಾಡಿ ಮದುವೆ ಎಂಬ ಆಸೆಯ ಪಂಜರಕ್ಕೆ ನೂಕಿ ಅವರನ್ನು ಬಲವಂತವಾಗಿ ಮತಾನ್ತರಿಸಿ ನಂತರ ಭಯೋತ್ಪಾದನೆಯಂತಹ ಹೀನ ಕೆಲಸಕ್ಕೆ ಅವರನ್ನು ಬಳಸಿಕೊಳ್ಳುತ್ತಿದ್ದಾರೆ.
ಈ ಭೂತ ಅಲ್ಲಿಯ ಕ್ರಿಸ್ತಿಯನ್ ಸಮುದಾಯವನ್ನು ಕೂಡ ಬಿಟ್ಟಿಲ್ಲ.ಹಾಗಾಗಿ ಈಗ ಕ್ರಿಸ್ತಿಯನ್ನರು ಕೂಡ ಹಿಂದೂ ಸಂಘಟನೆಯ ಜೊತೆ ಲವ್ ಜಿಹಾದ್ ವಿರುದ್ಧ ಕೈ ಜೋಡಿಸಿದೆ."ಪ್ರೀತಿ ಪ್ರೇಮಕ್ಕೆ ಜಾತಿ-ಧರ್ಮದ ತಾರತಮ್ಯವೂ ಇಲ್ಲ.ಆದರೆ ಕೆಲವು ಉದ್ದೇಶ,ಗುರಿಗಳನ್ನು ಇಟ್ಟುಕೊಂಡು ಮಾಡುವ "ಪ್ರೀತಿ",ಪಿತೂರಿಯಾಗಿ ಹೆಣ್ಣುಮಕ್ಕಳ ಬದುಕನ್ನೇ ಭಸ್ಮ ಮಾಡಿಬಿಡುತ್ತದೆ.ವಿವಾಹ ಭರವಸೆ ಕೊಟ್ಟು,ಲೈಂಗಿಕ ಸಂಪರ್ಕ ಬೆಳೆಸಿ ಅದನ್ನು ಚಿತ್ರೀಕರಿಸಿ ಬ್ಲಾಕ್ಕಮೈಲ್ ಮಾಡಿದ ನಿದರ್ಶನಗಳು ಕೂಡ ಇವೆ.ಈ ಹಿನ್ನೆಲೆಯಲ್ಲಿ "ಹೆಣ್ಣುಮಕ್ಕಳ ಗೆಳೆತನ,ಕಂಪ್ಯೂಟರ್,ಮೊಬೈಲ್ ಮೇಲೆ ಹೆತ್ತವರು ಕಣ್ಣಿಡುವಂತೆ ಕ್ಯಾಥೊಲಿಕ್ ಚರ್ಚ್ ಸುತ್ತೋಲೆ ಹೊರಡಿಸಿದೆ.
ಹುಡುಗಿಯರೇ,ನಿಮ್ಮ ಪ್ರೀತಿ ಹೊತ್ತು-ಹೆತ್ತು,ಸಾಕಿ-ಸಲಹಿ,ಬದುಕು ಕೊಟ್ಟ ಅಪ್ಪ ಅಮ್ಮನನ್ನು ಮಾನಸಿಕವಾಗಿ ಹಿಂಸಿಸಿ ಕೊಲ್ಲದಿರಲಿ.ಪ್ರೀತಿಸುವ ಮುನ್ನ ಒಮ್ಮೆ ಯೋಚಿಸಿ.ಪ್ರೀತಿಸುವ ವ್ಯಕ್ತಿಯ ಬಗ್ಗೆ ತಿಳಿದುಕೊಂಡು ಪ್ರೀತಿಸಿ.ಅವರ ಉದ್ದೇಶ,ಗುರಿಯ ಕಡೆ ಒಂದು ಸಣ್ಣ ಅವಲೋಕನ ಮಾಡಿ ಪ್ರೀತಿಯ ನಿರ್ಧಾರ ಕೈಗೊಳ್ಳಿ.ಅನಾಯಾಸವಾಗಿ ಬಂದ ಈ ಅಮೂಲ್ಯ ಮಾನವ ಜನ್ಮವನ್ನು "ಲವ್ ಜಿಹಾದ್"ಅಂತವರ ಕೈಗೆ ಕೊಟ್ಟು ಹಾಳುಮಾಡಿಕೊಳ್ಳಬೇಡಿ.
[ ಈ ಕುರಿತ ಹೆಚ್ಚಿನ ಮಾಹಿತಿಗೆ ನಿಮ್ಮ ಗೂಗಲ್ ಸರ್ಚ್ ಅಲ್ಲಿ articles on love jihad ಅಂತ ಕೊಡಿ...ಭಯಾನಕತೆಯ ಪುಟಗಳು ತೆರೆದುಕೊಳ್ಳುತ್ತದೆ]

Tuesday, October 13, 2009

ಮಳೆ ನಿಂತು ಹೋದ ಮೇಲೆ.....

ಹುಯ್ಯೋ ಹುಯ್ಯೋ ಮಳೆರಾ...ಅಂತ ಪ್ರತಿ ವರ್ಷ ಗೋಳಿಡುತ್ತಿದ್ದ ಉತ್ತರ ಕರ್ನಾಟಕದ ಜನತೆ ಇಂದು "ಯಾಕಪ್ಪಾ ಈ ಕೋಪ ನಮ್ಮ ಮೇಲೆ ಮಳೆರಾಯ..?"ಎಂದು ಕಣ್ಣೀರು ಸುರಿಸುತ್ತಿದ್ದಾರೆ.ಮಳೆಗಾಲದ ಆರಂಭದಲ್ಲಿ ಭೀಕರ ಬಿಸಿಲು.ಬೆಳೆ ಕೈಗೆ ಬರುವ ಸಮಯದಲ್ಲಿ ಭಯಂಕರ ಪ್ರವಾಹ.ಇವತ್ತು ಅವರ ಬದುಕು ಆ ದೇವರಿಗೇ ಪ್ರೀತಿ.
ಕೃಷ್ಣೆ ,ತುಂಗಭದ್ರೆಯರು ಉಕ್ಕಿ ಹರಿದ ಪರಿಣಾಮ ಮನೆ ಕಳೆದುಕೊಂಡು ಬೀದಿಗೆ ಬಿದ್ದ ಆ ಜನಸ್ತೋಮದ ಸಣ್ಣ ಚಿತ್ರಣ ಈ ಫೋಟೋಗಳನ್ನು ನೋಡಿದರೆ ನಮಗೆ ಸಿಗುತ್ತದೆ. ಬಡವನ ಅರಮನೆ ಈಗ ಮಳೆ ಮುಗಿದ ಮೇಲೆ "ಅರಮನೆ"ಯೇ ಆಗಿದೆ.ಆ ಮುರುಕಲು ಗೋಡೆ,ಕೆಸರು ಮಣ್ಣಿನ ಮಧ್ಯೆ ಬದುಕು ಹುಡುಕುತ್ತಿದ್ದಾರೆ.
ಈ ಮೇಲಿನ ಫೋಟೋಗಳನ್ನು ನೋಡಿದರೆ ಪ್ರಾಚ್ಯಶಾಸ್ತ್ರ ಅಧ್ಯಯನ ಸಂಸ್ಥೆಯವರು ಉತ್ಕನನ ಮಾಡುತ್ತಿರುವಂತೆ ಕಾಣುತ್ತದೆ.ಆದರೆ ಈ ಜನ ಹುಡುಕುತ್ತಿರುವುದು ಪ್ರವಾಹದಲ್ಲಿ ಮುರಿದು ಬಿದ್ದು ಹಾಳಾದ ಮನೆಗಳ ಕೆಳಗೆ ತಮ್ಮ ಬದುಕನ್ನು.ಬಡ ರೈತರ ಈ ಬವಣೆ ನೋಡಿದರೆ ಎಂತವರ ಕಣ್ಣಲ್ಲೇ ಆದರು ಒಂದು ಹನಿ ನೀರು ಬರದೇ ಇರಲಾರದು.ನಮ್ಮಂತ ನಗರವಾಸಿಗಳಿಗೆ ಮೂರು ಹೊತ್ತು ಹೊಟ್ಟೆಗೆ ಹಿಟ್ಟು ಕೊಡುತ್ತಿದ್ದ ನಮ್ಮಪ್ಪ ಅನ್ನದಾತ ಇಂದು ತಾನೆ ಹೊಟ್ಟೆಗಿಲ್ಲದೆ ಒದ್ದಾಡುವಂತಾಗಿದೆ.ಬಿಜಾಪುರ,ಗುಲ್ಬರ್ಗ,ರಾಯಚೂರು,ಬಳ್ಳಾರಿ,ದಾವಣಗೆರೆ,ಧಾರವಾಡ ಹೀಗೆ ಸಂಪೂರ್ಣ ಉತ್ತರ ಕರ್ನಾಟಕ ಮಳೆಯಲ್ಲಿ ಕೊಚ್ಚಿ ಹೋಗಿದೆ.ತನಗೆ ಅನ್ನ ಕೊಡುತ್ತಿದ್ದ ದೈವಕ್ಕೆ ಸಹಾಯ ಮಾಡಲು ಕರ್ನಾಟಕದ ಜನತೆ ಮುಂದಾಗಿದೆ.
ಮಕ್ಕಳಾದಿಯಾಗಿ ವಯೋವೃದ್ದರ ತನಕ ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.ಬಟ್ಟೆಬರೆ,ದವಸಧಾನ್ಯ,ಸೋಪು,ಕುಡಿಯುವ ನೀರು ಹೀಗೆ ಎಲ್ಲವನ್ನು ತುಂಬಿಸಿ ತುಂಬಿಸಿ ಕಳಿಸುತ್ತಿದ್ದಾರೆ.ಇಂದಿಗೂ ಜನರಲ್ಲಿ ಇಷ್ಟರ ಮಟ್ಟಿಗೆ ಸಹಾಯ ಮಾಡುವ ಗುಣ ಉಳಿದಿದೆ.ಅಲ್ಲಿಯ ಜನರ ಹೃದಯ ತುಂಬಿದ ಮಾತು ನಮಗೆ ಸಾಕು,ಒಂದು ಸಾರ್ತಕ್ಯ ಭಾವ ಕೊಡಲು.ಮೇಲೆ ಹಾಳಾದ ನಮ್ಮ ಜನರ ಬದುಕಿನ ಫೋಟೋವನ್ನು ನೋಡಿ,ಕೆಳಗೆ ಹರಿದು ಬಂದ ರಾಶಿ ರಾಶಿ ಸಹಾಯದ ಫೋಟೋವನ್ನು ನೋಡಿ.ಕೇವಲ ನೋಡಿ ಒಂದು ನಿಟ್ಟುಸಿರು ಕೊಡುವ ಬದಲು ಕೈಲಾದ ಸಹಾಯ ಮಾಡಿ...ಆಗ ಬರೆದ ನನಗೂ ಓದಿದ ನಿಮಗೂ ಇಬ್ಬರಿಗೂ ಮನೋತೃಪ್ತಿ ಸಿಗುವುದು....ಅಲ್ಲವೇ?

Monday, October 12, 2009

ನಮ್ಮ ಸ್ಯಾಂಕಿ ಕೆರೆ









ನಿಸರ್ಗವ ನೋಡಿದರೆ ತಣಿಯದ ಮನವುನ್ಠೆ ಈ ಜಗದೊಳು...?? ಈ ಮಾತು ಮೇಲಿನ ಫೋಟೋಗಳನ್ನು ನೋಡಿದರೆ ಅಕ್ಷರಶಃ ಸತ್ಯ ಅನ್ನಿಸುತ್ತದೆ. ಈ ಸುಂದರ ನಯನ ಮನೋಹರ ಜಾಗ ಎಲ್ಲಿರ ಬಹುದು..??ನಾನಿರುವ ಜಾಗದಿಂದ ಎಷ್ಟು ದೂರ..?? ಹೋಗಿ ನೋಡಿ ಸ್ವಲ್ಪ ಕಾಲ ಇದ್ದು ಬರಬಹುದೇ...?? ಈ ಪ್ರಶ್ನೆಗಳ ಸರಮಾಲೆಯೇ ಮನಸೊಳಗೆ ಇದ್ದಿರಬಹುದು.ಬೆಂಗಳೂರಿಗರೇ ಎಲ್ಲೂ ದೂರ ಹೋಗ ಬೇಕಾಗಿಲ್ಲ...ಇದು ನಮ್ಮಲ್ಲಿಯೇ ಇದೆ. ಮೇಲೆ ನೋಡಿರುವ ಫೋಟೋಗಳು ನಮ್ಮ ಸುಂದರ "ಸ್ಯಾಂಕಿ ಕೆರೆ "..ಸಂಜೆಯ ಹೊತ್ತು ತಂಗಾಳಿಯಲ್ಲಿ ಒಂದು ಸುತ್ತು ವಾಕಿಂಗ್ ಹೋಗಿ ಬರಲು ಒಳ್ಳೆಯ ಜಾಗ..ಅದಕ್ಕೆ ಸರಿಯಾಗಿ ಸುಂದರ ಕೆರೆ,ಉದ್ಯಾನವನ ನಿರ್ಮಿಸಿ ಸೌನ್ಧರ್ಯವನ್ನು ಹೆಚ್ಚಿಸಿದ್ದಾರೆ.ಸಂಜೆಯ ಆ ತಂಗಾಳಿಯಲ್ಲಿ ಸುಂದ ಕೆರೆಯ ಸೌಂದರ್ ಒಮ್ಮೆ ಸವಿದರೆ ಮನಸ್ಸು ಹೃದಯ ಎರಡೂ ಶಾಂತವಾಗುತ್ತದೆ...ಹುಂ..!!!ಹಾಗೆ ಸ್ವಲ್ಪ ಕೆಳಗಿನ ಫೋಟೋವನ್ನೂ ನೋಡಿ...

ಹಾಂ...!!ಬೆಚ್ಚಿಬೀಳಬೇಡಿ...ಇದೂ ಕೂಡ ನಮ್ಮ ಸ್ಯಾಂಕಿ ಕೆರೆಯೇ..ಅನುಮಾನವೇ ಬೇಡ.ಈಗಷ್ಟೆ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಿ ಮುಗಿಸಿರುವ ನಾವುಗಳು ಪೂಜಿಸಿದ ಗಣೇಶನ ಮೂರ್ತಿಗಳೆಲ್ಲ ಈಗ ಇಲ್ಲೇ ಇವೆ..ಸ್ವಲ್ಪ ಗಮನಿಸಿ ನೋಡಿ..ಗಣಪತಿ ಮೂರ್ತಿಗಳು ಕರಗದೆ ಹಾಗೇ ಉಳಿದಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.ನಮ್ಮ ದೈವ ಭಕ್ತಿ ಎಷ್ಟು ಕೊಚ್ಚೆಯನ್ನು ಸೃಷ್ಟಿಸಿದೆ ನೋಡಿ.ಈಗ ದೀಪಾವಳಿ ಬರಿತ್ತಲಿದೆ..ಗಣೇಶನ ಹಬ್ಬದಲ್ಲಿ ನೀರನ್ನ ಕಲುಷಿತ ಗೊಳಿಸಿ ಆಗಿದೆ..ಈಗ ಗಾಳಿಯ ಸರದಿ. ದಯವಿಟ್ಟು ಯೋಚಿಸಿ.ಹವಾಮಾನ ಕೆಟ್ಟು ಕೆರ ಹಿಡಿದಿರುವ ಈ ಸಮಯದಲ್ಲಿ ಮತ್ತೆ ಪಟಾಕಿ ಹೊಗೆಯಿಂದ ಮಲಿನಗೊಳಿಸಬೇಕೆ..?? ಯೋಚಿಸಿ..ನಂತರ ಪಟಾಕಿ ತರಲು ಹೊರಡಿ...ತಂದಿದ್ದಾರೆ ದಯವಿಟ್ಟು ಸುಡಬೇಡಿ..ನಮ್ಮ ಮುಂದಿನ ಪೀಳಿಗೆಗೂ ಕೂಡ ಈ ಭೂಮಿ,ನೆಲ,ಜಲ,ಗಾಳಿಯನ್ನು ಬಿಟ್ಟು ಹೋಗೋಣ..ಸ್ವಲ್ಪ ಶುದ್ದತೆಯ ಜೊತೆಗೆ....ಏನಂತೀರಿ..????